ನಭೋಮಂಡಲ ನಕ್ಷತ್ರ-ಹೆಚ್ ಜಿ ಶ್ರೀನಿವಾಸಮೂರ್ತಿ

ಅಲಂಕಾರ ಗೋಪಿನಾಥ್
ನಿವೃತ ಪತ್ರಕರ್ತರು
ಹೊಳೆನರಸೀಪುರ.

ನಭೋಮಂಡಲ ನಕ್ಷತ್ರ ಹೊಳೆನರಸೀಪುರ ಗೋವಿಂದ ರಾವ್ ಶ್ರೀನಿವಾಸಮೂರ್ತಿ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಶ್ರೇಷ್ಠ ವಿಜ್ಞಾನಿಯಾಗಿ ಧ್ರುವತಾರೆಯೆಂದು ಗುರುತಿಸಲ್ಪಟ್ಟ ವರು ಹಾಗೂ ಮಾನ್ಯ ಏ ಪಿ ಜೆ. ಅಬ್ದುಲ್ ಕಲಾಂ ಅವರಂತಹ ಮತೊಬ್ಬ ವಿಜ್ಞಾನಿಯನ್ನು ತರಬೇತಿಮಾಡಿ ಬೆಳೆಸಿದ ಕೀರ್ತಿ ಓರ್ವ ಕನ್ನಡಿಗನದು ಎಂಬ ಹೆಮ್ಮೆ ಜೊತೆಗೆ ಇವರು ಮೂಲತಃ ಹೊಳೆನರಸೀಪುರದವರೆಂಬ ಮಾಹಿತಿ ಇತ್ತೀಚೆಗಷ್ಟೇ ಲಭ್ಯವಾದಾಗ ಬಹು ಹೆಮ್ಮೆ ಎನ್ನಿಸಿತು ಹಾಗೆಯೇ ಇಂತಹ ಅದ್ಬುತ ವ್ಯಕ್ತಿ ಬಗೆಗೆ ಯಾರೊಬ್ಬರು ಬೆಳಕು ಚೆಲ್ಲದಿರುವುದು ವಿಪರ್ಯಾಸವೇ ಸರಿ. ಹೌದು ಸರಿಸುಮಾರು ಶತಮಾನದ ಹಿಂದೆ ಹೊಳೆನರಸೀಪುರದಲ್ಲಿ ನೆಲೆಸಿದ್ದ ಶ್ರೀಯುತ ಗೋವಿಂದ ರಾವ್ ಕಮಲಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಹೆಚ್ ಜಿ ಶ್ರೀನಿವಾಸಮೂರ್ತಿ ತಮ್ಮ ಬಾಲ್ಯ ದಿನಗಳನ್ನು ಊರಿನ ಮಣ್ಣಿನ ಜೊತೆ ಆಟವಾಡಿ ಕಳೆದವರು. ತಂದೆ ರೈಲ್ವೆ ಇಲಾಖೆಯಲ್ಲಿ ಇದ್ದವರು ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮೈಸೂರನ್ನು ಆಯ್ಕೆ ಮಾಡಲು ಹೆಚ್ ಜಿ ಶ್ರೀನಿವಾಸಮೂರ್ತಿ ಅವರ ಮುಂದಿನ ಓದು ಅಲ್ಲೇ ಮುಂದುವರೆದು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಿಂದ ಇಂಜಿನಿಯರ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿಕೊಂಡರು. ಹಿಂದೂಸ್ತಾನ್ ಎರೋನಾಟಿಕ್ ನಲ್ಲಿ ಉದ್ಯೋಗ ಪಡೆದು ಕೆಲ ವರ್ಷಗಳ ಸೇವಾ ನಂತರ ಬಾಂಬೆ ಅಂಬರ ರ್ನಾಥ್ ಪ್ರದೇಶದಲ್ಲಿದ್ದ ಆರ್ಡನನ್ಸ್ ಕಾರ್ಯಾಗಾರದಲ್ಲಿ ವೃತಿ ಮುಂದುವರೆಸಿ ತಮ್ಮಲಿ ಹುದುಗಿದ್ದ ತಾಂತ್ರಿಕ ಕೌಶಲ್ಯ ದಿಂದ ರಕ್ಷಣಾ ಕ್ಷೇತ್ರಕ್ಕೆ ಅಗತ್ಯದ ಮದ್ದು ಗುಂಡು ಪಿಸ್ತೂಲ್ ಬುಲೆಟ್ ಮತ್ತು ಆಯುಧ ತಯಾರಿಸುವಲ್ಲಿ ಮಾರ್ಗದರ್ಶನ ಮಾಡಿದರು.

ಈ ವೇಳೆಗಾಗಲೇ ಶ್ರೀನಿವಾಸಮೂರ್ತಿ ಅವರ ಉಚ್ಚ ಮಟ್ಟದ ತಾಂತ್ರಿಕತೆಯ ಕೌಶಲ್ಯ ಸಾಮರ್ಥ್ಯ ಗಮನಿಸಿದ್ದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕಾರ್ಯಾವಾಹಕ ಶ್ರೀ ವಿಕ್ರಮ್ ಸಾರಾಬಾಯಿ ಕೇರಳದ ತುಂಬಾ ರಾಕೆಟ್ ಉಡಾವಣಾ ಕೇಂದ್ರಕ್ಕೆ ಬರಮಾಡಿಕೊಂಡು ಅವರ ಆಮೂಲ್ಯ ಬುದ್ಧಿ ಸಾಮರ್ಥ್ಯ ಸಾರ್ಥಕಪಡಿಸಿಕೊಳ್ಳಲು ಕೇಳಿಕೊಂಡರು ರಕ್ಷಣಾವಲಯದ ಗುಂಡು ತಯಾರು ಕ್ಷೇತ್ರ ಬಿಟ್ಟು ರಾಕೆಟ್ ಉಡಾಯಿಸುವ ತಂತ್ರ ಜ್ಞಾನದ ಕಡೆಗೆ ನಡೆದ ಮೂರ್ತಿ ಪರಿಣಿತ ವಿಜ್ಞಾನಿಗಳಿಗೆ ಮಾರ್ಗದರ್ಶನ ಕೊಟ್ಟು ಭಾರತೀಯ ಮೊದಲ ಆಕಾಶಯಾನ ರಾಕೆಟ್ ನಭೋ ಮಂಡಲಕ್ಕೆ ಚಿಮ್ಮಿಸಿದ ಕೀರ್ತಿ ಹೊಳೆನರಸೀಪುರದ ಗೋವಿಂದರಾವ್ ಶ್ರೀನಿವಾಸಮೂರ್ತಿ ಅವರದ್ದು ಮುಂದೆ ವಿಜ್ಞಾನಿಗಳಾದ ನಾಯರ್ ಚೆಟ್ನೀಸ್ ಮುಂತಾದವರೊಂದಿಗೆ ಸೇರಿ ರಾಕೆಟ್ ನಭೋ ಮಂಡಲಕ್ಕೆ ಯಶಸ್ವಿಯಾಗಿ ಚಿಮ್ಮಿಸಿದ ಕೀರ್ತಿ ಪಾತ್ರರು. ಕೇರಳದ ತುಂಬಾ ಉಡಾವಣಾ ಕೇಂದ್ರದಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಯುನೈಟೆಡ್ ನೇಷನ್ ನಾಸಾ ಸಂಸ್ಥೆಯ ಅಧಿಕೃತ ಆಹ್ವಾನ ಮೇರೆ ಅಲ್ಲಿ ತಮ್ಮಕಾರ್ಯ ಚಟುವಟಿಕೆ ನಡೆಸುತ್ತಾ ಉನ್ನತ ಪದವಿ ಗೌರವಗಳಿಗೆ ಭಾಜನರಾದರು. ಇವರು 2008 ತಮ್ಮ 90 ರ ವಯಸ್ಸಿನಲ್ಲಿ ನಿಧನರಾದರು ಸಮಾಜ ಮತ್ತು ಸರ್ಕಾರ ಶ್ರೇಷ್ಠ ವಿಜ್ಞಾನಿ ಹೊಳೆನರಸೀಪುರ ಗೋವಿಂದರಾವ್ ಶ್ರೀನಿವಾಸಮೂರ್ತಿ ಬಗ್ಗೆ ಸಮಾಜ ಮತ್ತು ಸರ್ಕಾರ ಇನ್ನೂ ಹೆಚ್ಚು ಮಾಹಿತಿ ಸಂಗ್ರಹಿಸಿ ಗೌರವ ಸೂಚಿಸಬಹುದಲ್ಲವೇ.

Amazon Ads- Click on the below image to buy the books


1 thought on “ನಭೋಮಂಡಲ ನಕ್ಷತ್ರ-ಹೆಚ್ ಜಿ ಶ್ರೀನಿವಾಸಮೂರ್ತಿ”

  1. ಕಲ್ಗುಂಡಿ ನವೀನ್

    ನಮಸ್ತೆ
    ಬಹಳ ಒಳ್ಳೆಯ ಲೇಖನ. ಇಂದು ಮೂರ್ತಿಯವರನ್ನು ಅನೇಕರು ನೆನಪಿಸಿಕೊಳ್ಳುತ್ತಿದ್ದಾರೆ, ಬಹಳ ಸಂತೋಷದ ವಿಷಯ. ಲೇಖಕರಿಗೆ ಪತ್ರಿಕೆಯವರಿಗೆ ಹೃತ್ಪೂರ್ವಕ ಧನ್ಯವಾದಗಳು!

    ಕಲ್ಗುಂಡಿ ನವೀನ್
    ಶಿಕ್ಚಕ, ಪೂರ್ಣಪ್ರಮತಿ ಶಾಲೆ, ಗಿರಿನಗರ
    ಆನಂದವನ ಗುರುಕುಲ, ಮಾಗಡಿ.

Leave a Comment

Your email address will not be published. Required fields are marked *

Scroll to Top