ಖಗೋಳ ದರ್ಶನ

khagola

ನಕ್ಷತ್ರಲೋಕ ಎಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ. ಆಕಾಶದತ್ತ ದೃಷ್ಟಿ ಹಾಯಿಸಿದಾಗ ಮಿನುಗುವ ನಕ್ಷತ್ರಗಳು ಕೇವಲ ಅಲಂಕಾರವಲ್ಲ, ಅವು ಅನೇಕ ರಹಸ್ಯಗಳ ಮನೆ. ಪ್ರತಿಯೊಬ್ಬರ ಮನಸ್ಸಿನಲ್ಲೂ ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದ್ದೇ ಇರುತ್ತದೆ.

ಇಂದಿನ ವಿಜ್ಞಾನದಲ್ಲಿ ಬಳಸುವ ಅತಿ ಸೂಕ್ಷ್ಮ ಉಪಕರಣಗಳು ಮತ್ತು ಕಂಪ್ಯೂಟರ್‌ಗಳು ಕೊಡುವ ಫಲಿತಾಂಶಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವುದು ಸುಲಭವಲ್ಲ. ಅದನ್ನು ಸರಳವಾಗಿ ತಲುಪಿಸುವ ಅಗತ್ಯ ಇದೆ.

ಈ ಅಗತ್ಯವನ್ನು ಪೂರೈಸುವ ಉದ್ದೇಶದಿಂದಲೇ ಒಂದು ಸಂಪುಟವನ್ನು ತಯಾರಿಸಲಾಗಿದೆ. ಇದರಲ್ಲಿ ಭೌತವಿಜ್ಞಾನ ಮತ್ತು ಖಗೋಳಶಾಸ್ತ್ರದ ಮೂಲ ತತ್ವಗಳಿಂದ ಹಿಡಿದು ಅತಿ ಕಷ್ಟವಾದ ಸಿದ್ಧಾಂತಗಳವರೆಗೆ ಸುಲಭವಾಗಿ ವಿವರಿಸಲಾಗಿದೆ. ‘ಖಗೋಳ ದರ್ಶನ’ ಎಂಬ ಈ ಕೃತಿ ಶೈಲಜಾ ಬಿ.ಎಸ್‌ ಮತ್ತು ಆನಂತರಾಮು ಟಿ.ಆರ್‌ ಅವರ ಸಂಪಾದಿತ ಕೃತಿಯಾಗಿದೆ.

ಪ್ರಖ್ಯಾತ ವಿಜ್ಞಾನಿಗಳಾದ ಪ್ರೊ. ಸಿ. ವಿ. ವಿಶ್ವೇಶ್ವರ ಮತ್ತು ಪ್ರೊ. ಜಯಂತ್ ನಾರ್ಳೀಕರ್ ಅವರ ಲೇಖನಗಳು ಈ ಸಂಪುಟದಲ್ಲಿವೆ. ಜೊತೆಗೆ ನಮ್ಮ ನಡುವೆಯೇ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳೂ ತಮ್ಮ ಲೇಖನಗಳನ್ನು ನೀಡಿದ್ದಾರೆ. ಇವರ ಬರವಣಿಗೆಯ ನಿಖರತೆ ಮತ್ತು ಆಕರ್ಷಕ ಶೈಲಿಯು ಓದುಗರಿಗೆ ಹೊಸ ಲೋಕವೊಂದನ್ನು ಪರಿಚಯಿಸುತ್ತದೆ.

ಈ ಪುಸ್ತಕ ನಮ್ಮನ್ನು ಭೂಮಿ, ಚಂದ್ರ ಮತ್ತು ಸೌರಮಂಡಲ ದಾಟಿ ಕರೆದೊಯ್ಯುತ್ತದೆ. ನಕ್ಷತ್ರಗಳನ್ನು ಪರಿಚಯಿಸಿ, ಆಕಾಶಗಂಗೆಯ ಗ್ಯಾಲಕ್ಸಿ ಮತ್ತು ಅದರಾಚೆಯ ಅನೇಕ ಗ್ಯಾಲಕ್ಸಿಗಳ ಮಹಾ ವಿಸ್ತಾರವನ್ನು ನಮ್ಮ ಕಣ್ಣಿಗೆ ಕಟ್ಟಿದಂತೆ ವಿವರಿಸಲಾಗಿದೆ. ವಿಜ್ಞಾನವು ನೀಡುವ ಸಿದ್ಧಾಂತಗಳು ಮತ್ತು ನಾವು ಎದುರಿಸಬೇಕಾದ ಪ್ರಾಯೋಗಿಕ ಸವಾಲುಗಳೂ ಇದರಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ.

ವಿಶ್ವವೆಂಬ ಕಲ್ಪನೆ ಎಷ್ಟು ಅಗಾಧ ಮತ್ತು ಅಚ್ಚರಿಯಿಂದ ಕೂಡಿದೆ ಎಂಬುದನ್ನು ಈ ಸಂಪುಟ ತಿಳಿಸುತ್ತದೆ. ಅದನ್ನು ಅರ್ಥಮಾಡಿಕೊಳ್ಳಲು ಬೇಕಾದ ಹಂತ ಹಂತದ ಮೆಟ್ಟಿಲುಗಳನ್ನು ಕೂಡಾ ಈ ಪುಸ್ತಕ ಒದಗಿಸುತ್ತದೆ.

ಹೀಗಾಗಿ, ವಿಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೂ, ಸಾಮಾನ್ಯ ಓದುಗರಿಗೂ ಈ ಪುಸ್ತಕ ಒಂದು ದಾರಿದೀಪದಂತೆ ಸಹಾಯಮಾಡುತ್ತದೆ. ಭೌತವಿಜ್ಞಾನ ಮತ್ತು ಖಗೋಳಶಾಸ್ತ್ರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಲ್ಲಿ ಇದು ಉತ್ತಮ ಸಂಗಾತಿಯಾಗುತ್ತದೆ.

ಈ ಪುಸ್ತಕವನ್ನು ಖರೀದಿಸಲು ಕೆಳೆಗಿರುವ ಕೊಂಡಿಯನ್ನು ಕ್ಲಿಕ್ ಮಾಡಿ
ಖಗೋಳ ದರ್ಶನ

ಅಥವಾ ಕೆಳಗಿರುವ ದೂರವಾಣಿಗೆ ಕರೆ ಮಾಡಿ
Mobile: 96861 52902

1 thought on “ಖಗೋಳ ದರ್ಶನ”

Leave a Comment

Your email address will not be published. Required fields are marked *

Scroll to Top